Wavebytewavebyte.in
← All Articlesಮಹಿಳೆ: ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ..

ಮಹಿಳೆ: ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ..

ಇಂದು Mother’s Day. ಸಾಮಾನ್ಯವಾಗಿ ನಾನು Englishನಲ್ಲಿ ಬರೆಯಲು ಪ್ರಯತ್ನಿಸುತ್ತೇನೆ. ಆದರೆ ಇಂದು ಕನ್ನಡದಲ್ಲೇ ಬರೆಯಬೇಕು ಅನಿಸಿತು. ಯಾಕೆಂದರೆ ಕೆಲವು ಭಾವನೆಗಳನ್ನು ನಮ್ಮ ಮಾತೃಭಾಷೆಯಲ್ಲಿ ಹೇಳಿದಾಗ ಮಾತ್ರ ಅವು ಹೆಚ್ಚು ಸಹಜ ಅನ್ನಿಸುತ್ತದೆ.

ಇಂದು ಈ ಬರಹವನ್ನು ಕೇವಲ article ಆಗಿ ಅಲ್ಲ, ಮನಸಿನಿಂದ ಬಂದ ಕೆಲವು ಮಾತುಗಳಾಗಿ ಬರೆಯುತ್ತಿದ್ದೇನೆ.

ಒಬ್ಬ ಮಹಿಳೆ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಹಿಸುತ್ತಾಳೆ. ತಾಯಿಯಾಗಿ ತನ್ನ ಕುಟುಂಬಕೆ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ, ಹೆಂಡತಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊರುತ್ತಾಳೆ. ಮಗಳಾಗಿ ಮನೆಯವರ ಬೆಳಕಾಗಿರುತ್ತಾಳೆ. ಆದರೆ ಇಷ್ಟು ದೊಡ್ಡ ಜವಾಬ್ದಾರಿಗಳನ್ನು ಹೊರುವ ಮಹಿಳೆಯ ಶ್ರಮವನ್ನು ಸಮಾಜ ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ.

ಭಾರತದಲ್ಲಿ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ, ಮಹಿಳೆಯರ ಜೀವನ ಸುಲಭವಾಗಿರಲಿಲ್ಲ. ಹಲವಾರು ವರ್ಷಗಳಿಂದ ಮಹಿಳೆಯರಿಗೆ ಸಮಾನ ಸ್ಥಾನ ಕೊಡದ ಮನಸ್ಥಿತಿ ನಮ್ಮ ಸಮಾಜದಲ್ಲಿ ಇತ್ತು. “ಮಗ ಇದ್ದರೆ ಮನೆಗೆ ಹೆಸರು ಬರುತ್ತದೆ”, “ಮಗಳು ಒಂದು ದಿನ ಬೇರೆ ಮನೆಗೆ ಹೋಗುತ್ತಾಳೆ”, “ಮಗಳು ಕುಟುಂಬಕ್ಕೆ ಭಾರ” ಎಂಬ ಮಾತುಗಳನ್ನು ನಾವು ಸಾಕಷ್ಟು ಕೇಳಿದ್ದೇವೆ. ಕೆಲವು ಕಡೆ ಇನ್ನೂ ಕೇಳುತ್ತೇವೆ.

ಆದರೆ ಇಂದಿನ ಕಾಲ ಬದಲಾಗುತ್ತಿದೆ. ಮಹಿಳೆಯರು ಶಿಕ್ಷಣ, ಉದ್ಯೋಗ, ವೈದ್ಯಕೀಯ, ರಾಜಕೀಯ, ವಿಜ್ಞಾನ, ಕ್ರೀಡೆ, corporate leadership - ಎಲ್ಲ ಕ್ಷೇತ್ರಗಳಲ್ಲೂ ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಈ ಬದಲಾವಣೆ ನಿಧಾನವಾಗಿ ಬಂದರೂ, ಇದು ನಮ್ಮ ದೇಶದ ಸಮಾಜಕ್ಕೆ ಒಂದು ಒಳ್ಳೆಯ ಬೆಳವಣಿಗೆ.

ಉತ್ತರ ಕರ್ನಾಟಕದ ಗ್ರಾಮೀಣ ಮಹಿಳೆಯ ಜೀವನ

ನಾನು ಗ್ರಾಮೀಣ ಹಿನ್ನೆಲೆಯಿಂದ ಬಂದವನು. ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಮಹಿಳೆಯರ ಜೀವನ ಹೊರಗಿನಿಂದ ಕಾಣುವಷ್ಟು ಸುಲಭವಲ್ಲ. ನಗರಗಳಲ್ಲಿ ಇರುವ ಹಲವರಿಗೆ ಗ್ರಾಮೀಣ ಮಹಿಳೆಯ ಜೀವನದ ಕಷ್ಟ ಸಂಪೂರ್ಣವಾಗಿ ಅರ್ಥವಾಗದೇ ಇರಬಹುದು.

ಒಬ್ಬ ಗ್ರಾಮೀಣ ತಾಯಿಯ ದಿನ ಬೆಳಿಗ್ಗೆ ಸೂರ್ಯೋದಯಕ್ಕೂ ಮುಂಚೆ ಪ್ರಾರಂಭವಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಮನೆ ಸ್ವಚ್ಛ ಮಾಡುವುದು, ಮಕ್ಕಳನ್ನು ಎಬ್ಬಿಸುವುದು, ಅಡುಗೆ ಮಾಡುವುದು, ಅವರಿಗೆ ತಿನಿಸುವದು, ಶಾಲೆಗೆ ತಯಾರಿಸುವುದು - ಇವೆಲ್ಲ ಅವಳ ದಿನದ ಆರಂಭ ಮಾತ್ರ.

ಅದರ ನಂತರವೂ ಅವಳ ಕೆಲಸ ಮುಗಿಯುವುದಿಲ್ಲ. ಹಲವಾರು ಮಹಿಳೆಯರು ಕೃಷಿ ಕೆಲಸಕ್ಕೂ ಹೋಗುತ್ತಾರೆ. ಹೊಲದಲ್ಲಿ ಬಿಸಿಲಿನಲ್ಲೇ ಗಂಟೆಗಳ ಕಾಲ ದುಡಿಯುತ್ತಾರೆ. ಕೆಲವರು ಬೆಳೆ ಕಟಾವು ಮಾಡುತ್ತಾರೆ, ಕೆಲವರು ಪಶುಗಳನ್ನು ನೋಡಿಕೊಳ್ಳುತ್ತಾರೆ ಹೀಗೆ ಬೇರೆ ಬೇರೆ ಕೆಲಸದಲ್ಲಿ ತೊಡಗಿರುತ್ತಾರೆ. ನಂತರ ಸಂಜೆ ಮನೆಗೆ ಬಂದು ಮತ್ತೆ ಅಡುಗೆ, ಮಕ್ಕಳ ಕೆಲಸ, ಮನೆಯ ಕೆಲಸ - ಎಲ್ಲವನ್ನೂ ನೋಡಿಕೊಳ್ಳುತ್ತಾರೆ.

ಇದು ದಿನವೂ ನಡೆಯುತ್ತದೆ.

Corporate job ಮಾಡುವವರಿಗೆ office timing ಇರುತ್ತದೆ. Weekends ಇರುತ್ತವೆ. Sick leave ಇರುತ್ತದೆ. ಆದರೆ ಗ್ರಾಮೀಣ ಮಹಿಳೆಯ ಜೀವನದಲ್ಲಿ leave ಅನ್ನೋದೇ ಇಲ್ಲ. ಅವಳಿಗೆ ಆರೋಗ್ಯ ಸರಿಯಲ್ಲದಿದ್ದರೂ ಕೆಲಸ ನಿಲ್ಲುವುದಿಲ್ಲ. ದಣಿವು ಇದ್ದರೂ ವಿಶ್ರಾಂತಿ ಸಿಗುವುದಿಲ್ಲ.

ಹಲವಾರು ಜನ corporate job ತುಂಬಾ ಕಷ್ಟ ಎಂದು ಹೇಳುತ್ತಾರೆ. ಅದು ತಪ್ಪಲ್ಲ. Mental pressure ಅಲ್ಲಿ ಹೆಚ್ಚು ಇರುತ್ತದೆ. ಆದರೆ ಗ್ರಾಮೀಣ ಮಹಿಳೆಯ ಕೆಲಸ physical ಮತ್ತು mental ಎರಡೂ ರೀತಿಯಲ್ಲಿ ಕಷ್ಟಕರ.

ಅವಳು ಒಂದೇ ಸಮಯದಲ್ಲಿ:

  • mother
  • cook
  • worker
  • caretaker
  • farmer
  • financial planner

ಹೀಗೆ ಹಲವಾರು ಪಾತ್ರಗಳನ್ನು ನಿಭಾಹಿಸುತ್ತಾಳೆ.

ಆದರೂ ಸಮಾಜದಲ್ಲಿ ಅವಳಿಗೆ ಕೊಡಬೇಕಾದಷ್ಟು ಗೌರವ ಇನ್ನೂ ಸಿಗುತ್ತಿಲ್ಲ.

ಗೃಹಿಣಿಯ ಜೀವನದಲ್ಲಿ ಇರುವ ಕಷ್ಟ ಮತ್ತು ಜವಾಬ್ದಾರಿಗಳನ್ನು ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ

ಇಂದಿನ ಸಮಾಜದಲ್ಲಿ working womenಗೆ ಗೌರವ ಹೆಚ್ಚಾಗಿದೆ. ಮಹಿಳೆಯರು IT companies, banks, government offices, hospitals - ಎಲ್ಲ ಕಡೆ ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.

ಆದರೆ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುವ ಮಹಿಳೆಯ ಶ್ರಮವನ್ನು ಸಮಾಜ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

“ಅವಳು ಮನೆಯಲ್ಲೇ ಇರುತ್ತಾಳಲ್ಲ” ಎಂಬ ಮಾತುಗಳನ್ನು ನಾವು ಸಾಕಷ್ಟು ಕೇಳುತ್ತೇವೆ. ಆದರೆ ಮನೆಯಲ್ಲಿರುವ ಮಹಿಳೆಯ ಕೆಲಸವನ್ನು ಒಂದು ದಿನ ಮಾಡಿದರೆ ಅದರ ಕಷ್ಟ ಗೊತ್ತಾಗುತ್ತದೆ.

ಒಬ್ಬ ಗೃಹಿಣಿ ಬೆಳಿಗ್ಗೆಯಿಂದ ರಾತ್ರಿ ತನಕ ಕುಟುಂಬಕ್ಕಾಗಿ ಕೆಲಸ ಮಾಡುತ್ತಾಳೆ. Salary ಇಲ್ಲ ಅಂದರೆ ಕೆಲಸಕ್ಕೆ value ಇಲ್ಲ ಅನ್ನೋದು ತಪ್ಪು ಯೋಚನೆ.

ಒಂದು ಕುಟುಂಬ ಸರಿಯಾಗಿ ನಡೆಯುವುದಕ್ಕೆ ಗೃಹಿಣಿಯ ಪಾತ್ರ ತುಂಬಾ ಮುಖ್ಯ.

ಅವಳು:

  • ಮಕ್ಕಳ ಆಟ, ಓದು, ಆರೋಗ್ಯ, ಎಲ್ಲವನ್ನೂ ನೋಡಿಕೊಳ್ಳುತ್ತಾಳೆ
  • ಹಿರಿಯರನ್ನು ನೋಡಿಕೊಳ್ಳುತ್ತಾಳೆ
  • ಎಲ್ಲರ ಆರೋಗ್ಯದ ಬಗ್ಗೆ ಯೋಚಿಸುತ್ತಾಳೆ
  • ಮನೆಯ ಖರ್ಚು ವೆಚ್ಚವನ್ನು ಯಾರಿಗೂ ಭಾರವಾಗದಂತೆ ನಿಭಾಹಿಸುತ್ತಾಳೆ
  • ಕುಟುಂಬದ ಎಲ್ಲರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾಳೆ
  • ಮನೆಯ ಎಲ್ಲರಿಗೂ ಧೈರ್ಯ ಕೊಡುತ್ತಾಳೆ

ಒಂದು ದಿನ ಗೃಹಿಣಿ ಕೆಲಸ ಮಾಡದೇ ಇದ್ದರೆ ಮನೆಯ ಪರಿಸ್ಥಿತಿ ಹೇಗಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತಾಗುತ್ತದೆ.

ಆದ್ದರಿಂದ working women ಮತ್ತು housewife ಇಬ್ಬರ ಶ್ರಮಕ್ಕೂ ಸಮಾನ ಗೌರವ ಸಿಗಬೇಕು.

ಮಗಳು - ಮನೆಯ ನಿಜವಾದ ಸಂತೋಷ

ನಮ್ಮ ಸಮಾಜದಲ್ಲಿ ಬಹಳ ವರ್ಷಗಳಿಂದ “ಮಗ ಇದ್ದರೆ ಒಳ್ಳೆಯದು” ಎಂಬ ಮನಸ್ಥಿತಿ ಇತ್ತು. ಕೆಲವು ಕುಟುಂಬಗಳಲ್ಲಿ ಈಗಲೂ ಇದೆ.

ಮಗಳು ಹುಟ್ಟಿದಾಗ ಕೆಲವರು ದುಃಖಪಡುವುದು ನಿಜವಾಗಿಯೂ ನೋವಿನ ವಿಷಯ.

ಆದರೆ ನಿಜವಾಗಿ ನೋಡಿದರೆ ಮಗಳು ಮನೆಯ ಬೆಳಕು.

ಮಗಳು ಇರುವ ಮನೆ ಹೆಚ್ಚು ಪ್ರೀತಿ ಮತ್ತು ನಗುವಿನಿಂದ ತುಂಬಿರುತ್ತದೆ. ಅವಳ ಮಾತು, ಅವಳ ಕಾಳಜಿ, ಅವಳ ಪ್ರೀತಿ - ಇವೆಲ್ಲ ಮನೆಯ ವಾತಾವರಣವನ್ನು ಬದಲಾಯಿಸುತ್ತವೆ.

ಅಪ್ಪ ಮತ್ತು ಮಗಳ ಸಂಬಂಧ ತುಂಬಾ ವಿಶೇಷ. ಚಿಕ್ಕ ಮಗಳು ಅಪ್ಪನ ಬೆರಳು ಹಿಡಿದು ನಡೆಯುವ ಕ್ಷಣಗಳು ಜೀವನದ ಸುಂದರ ನೆನಪುಗಳು.

ಅನೇಕ ಕುಟುಂಬಗಳಲ್ಲಿ ವಯಸ್ಸಾದ ತಂದೆ-ತಾಯಿಯ ಆರೈಕೆಯಲ್ಲಿ ಹೆಣ್ಣುಮಕ್ಕಳ ಪಾತ್ರ ತುಂಬಾ ದೊಡ್ಡದಾಗಿರುತ್ತದೆ. ತಂದೆ-ತಾಯಿಯ ನೋವು ಮತ್ತು ಕಷ್ಟವನ್ನು ಹೆಚ್ಚು ಅರ್ಥಮಾಡಿಕೊಳ್ಳುವುದು ಹೆಣ್ಣುಮಕ್ಕಳು.

ಇಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಯಾವ ಕ್ಷೇತ್ರದಲ್ಲೂ ಹಿಂದೆ ಇಲ್ಲ.

  • doctors ಆಗಿದ್ದಾರೆ
  • engineers ಆಗಿದ್ದಾರೆ
  • scientists ಆಗಿದ್ದಾರೆ
  • pilots ಆಗಿದ್ದಾರೆ
  • police officers ಆಗಿದ್ದಾರೆ
  • entrepreneurs ಆಗಿದ್ದಾರೆ

ನಮ್ಮ ದೇಶದ ರಾಷ್ಟ್ರಪತಿ Droupadi Murmu ಅವರು ಸಾಮಾನ್ಯ ಮತ್ತು ಬಡ ಕುಟುಂಬದಿಂದ ಬಂದ ಮಹಿಳೆ. ಇದು ಎಲ್ಲರರಿಗೂ ದೊಡ್ಡ ಪ್ರೇರಣೆ.

ಅದೇ ರೀತಿ Nirmala Sitharaman ಅವರು ದೇಶದ ಹಣಕಾಸು ಸಚಿವೆಯಾಗಿ ದೊಡ್ಡ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇದು ಏನು ತೋರಿಸುತ್ತದೆ ಎಂದರೆ: ಅವಕಾಶ ಮತ್ತು ಪ್ರೋತ್ಸಾಹ ಕೊಟ್ಟರೆ ಮಹಿಳೆಯರು ಯಾವುದೇ ಮಟ್ಟಕ್ಕೆ ಹೋಗಬಹುದು.

ಕಳೆದ 12 ವರ್ಷಗಳಲ್ಲಿ ಕಂಡ ಬದಲಾವಣೆ

ಭಾರತದಲ್ಲಿ ಮಹಿಳೆಯರ ಬಗ್ಗೆ ಇರುವ ಮನಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ವಿಶೇಷವಾಗಿ ಕಳೆದ 10 ರಿಂದ 12 ವರ್ಷಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.

ಹಿಂದೆ:

  • ಕೆಲವು ಕುಟುಂಬಗಳಲ್ಲಿ ಮಗಳನ್ನು ಹೆಚ್ಚು ಓದಿಸಲಿಲ್ಲ
  • ಬೇಗ ಮದುವೆ ಮಾಡುತ್ತಿದ್ದರು
  • ಕೆಲಸ ಮಾಡಲು ಅವಕಾಶ ಕೊಡುತ್ತಿರಲಿಲ್ಲ
  • ಮನೆಯ ಮತ್ತು ಸಮಾಜದ ಪ್ರಮುಖ ನಿರ್ಧಾರಗಳಲ್ಲಿ ಮಹಿಳೆಯರ ಮಾತಿಗೆ ಹೆಚ್ಚು ಅವಕಾಶ ಇರಲಿಲ್ಲ

ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ.

ಇಂದಿನ ಪೋಷಕರು ತಮ್ಮ ಮಗಳಿಗೆ ಉತ್ತಮ ಶಿಕ್ಷಣ ಕೊಡುತ್ತಿದ್ದಾರೆ. Engineering, medical, IAS, business - ಎಲ್ಲ ಕ್ಷೇತ್ರಗಳಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ.

ಹಿಂದೆ ಹೋಲಿಸಿದರೆ ಈಗ ಹಳ್ಳಿಗಳಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತಿದೆ. ಸರ್ಕಾರದ ಯೋಜನೆಗಳು ಮತ್ತು ಜನರ ಯೋಚನೆಯಲ್ಲಿ ಬಂದ ಬದಲಾವಣೆ ಇದಕ್ಕೆ ಸಹಾಯ ಮಾಡಿದೆ.

Social media ಮತ್ತು internet ಬಂದ ನಂತರ ಮಹಿಳೆಯರಿಗೆ ತಮ್ಮ ಪ್ರತಿಭೆ ತೋರಿಸಲು ಇನ್ನಷ್ಟು ಅವಕಾಶ ಸಿಕ್ಕಿದೆ.

Corporate worldನಲ್ಲಿ ಮಹಿಳೆಯರ ದೊಡ್ಡ ಪಾತ್ರ

ಒಂದು ಸಮಯದಲ್ಲಿ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ.

ಇಂದು ಮಹಿಳೆಯರು:

  • CEOs ಆಗಿದ್ದಾರೆ
  • team leads ಆಗಿದ್ದಾರೆ
  • project managers ಆಗಿದ್ದಾರೆ
  • startup founders ಆಗಿದ್ದಾರೆ
  • senior executives ಆಗಿದ್ದಾರೆ

ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಮಹಿಳೆಯರು ದೊಡ್ಡ teamಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. Teamನಲ್ಲಿ ಒಳ್ಳೆಯ ಹೊಂದಾಣಿಕೆ ಮತ್ತು ವಿಶ್ವಾಸ ಬೆಳೆಸುವುದರಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ.

ಕಚೇರಿಯಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೂ ಮನೆಯ ಜವಾಬ್ದಾರಿಗಳನ್ನು ಮರೆಯುವುದಿಲ್ಲ. ಇದು ಸುಲಭದ ಕೆಲಸ ಅಲ್ಲ.

ಆದ್ದರಿಂದ ಎರಡು ಕಡೆಗಳ ಜವಾಬ್ದಾರಿಗಳನ್ನು ನಿಭಾಯಿಸುವ ಮಹಿಳೆಯರ ಶ್ರಮ ಸಣ್ಣದು ಅಲ್ಲ ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು.

ಮಹಿಳೆಯರ ಬಗ್ಗೆ ಇನ್ನೂ ಬದಲಾವಣೆ ಬೇಕು

ಹೌದು, ಸಮಾಜದಲ್ಲಿ ಬದಲಾವಣೆ ಬಂದಿದೆ. ಆದರೆ ಇನ್ನೂ ಸಾಕಷ್ಟು ಬದಲಾವಣೆ ಬೇಕು.

ಇಂದಿಗೂ:

  • ಕೆಲವು ಕಡೆ ಇನ್ನೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೇಕಾದಷ್ಟು ಮಹತ್ವ ಕೊಡಲಾಗುತ್ತಿಲ್ಲ
  • ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ
  • ಮಹಿಳೆಯರ ಸುರಕ್ಷತೆ ಬಗ್ಗೆ ಇನ್ನೂ ಹಲವಾರು ಆತಂಕಗಳು ಇವೆ
  • ಗೃಹಿಣಿಯ ಕೆಲಸವನ್ನು ಹಲವರು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ, ಅದು ಹಗುರ ಅಂತ ತಿಳಿದುಕೊಂಡಿದಾರೆ.

ಇವೆಲ್ಲ ನಿಧಾನವಾಗಿ ಬದಲಾಗಬೇಕು.

ಮಹಿಳೆಯರನ್ನು ಗೌರವಿಸುವುದು ಅಂದರೆ ಕೇವಲ Women’s Day ಅಥವಾ Mother’s Day wishes ಹೇಳುವುದು ಅಲ್ಲ.

ನಿಜವಾದ ಗೌರವ ಎಂದರೆ:

  • ಅವರ ಅಭಿಪ್ರಾಯಕ್ಕೂ ಮಹತ್ವ ನೀಡುವುದು
  • ಅವರ ಕನಸುಗಳಿಗೆ support ಮಾಡುವುದು
  • ಮನೆಯ ಕೆಲಸದಲ್ಲಿ ಸಹಾಯ ಮಾಡುವುದು
  • ಮನೆಯ ನಿರ್ಧಾರಗಳಲ್ಲಿ ಅವರ ಅಭಿಪ್ರಾಯವನ್ನೂ ಕೇಳುವುದು

ಮಹಿಳೆಯ ಸಹನೆ ಮತ್ತು ತ್ಯಾಗ

ಮಹಿಳೆಯ ಜೀವನದಲ್ಲಿ ಹಲವಾರು ಹೇಳದ ಕಷ್ಟಗಳು ಮತ್ತು ತ್ಯಾಗಗಳು ಇರುತ್ತವೆ.

ತಾಯಿ ತನ್ನ ಮಕ್ಕಳಿಗಾಗಿ ತನ್ನ ಆರೋಗ್ಯದ ಕಡೆ ಗಮನಕೊಡದೆ ದುಡಿಯುತ್ತಾಳೆ.

ಪತ್ನಿ ಕುಟುಂಬಕ್ಕಾಗಿ ತನ್ನ ಕನಸುಗಳನ್ನು ಕೆಲವೊಮ್ಮೆ ಬದಿಗಿಡುತ್ತಾಳೆ.

ಮಗಳು ಹಲವಾರು ಬಾರಿ ತಂದೆ-ತಾಯಿಯ ಸಂತೋಷಕ್ಕಾಗಿ ತನ್ನ ಇಷ್ಟಗಳನ್ನು ಬದಿಗಿಡುತ್ತಾಳೆ.

ಎಷ್ಟೇ ಕಷ್ಟ ಇದ್ದರೂ ಮಹಿಳೆಯರು ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕುಟುಂಬಕ್ಕಾಗಿ ಮುಂದುವರೆಯುತ್ತಾರೆ. ಅವರ ನಿಜವಾದ ಶಕ್ತಿ ಮಾತಿನಲ್ಲಿ ಅಲ್ಲ, ಸಹನೆಯಲ್ಲಿರುತ್ತದೆ.

ನನ್ನ ದೃಷ್ಟಿಯಲ್ಲಿ ಮಹಿಳೆ

ನನ್ನ ದೃಷ್ಟಿಯಲ್ಲಿ ಮಹಿಳೆ ಎಂದರೆ ಕೇವಲ ಒಂದು ಸಂಬಂಧ ಅಲ್ಲ.

ಅವಳು:

  • ಮನೆಯ ಶಕ್ತಿ
  • ಮನೆಯ ಮುಖ್ಯ ಆಧಾರ
  • ಪ್ರೀತಿಯ ರೂಪ
  • ಸಹನೆಯ ಸಂಕೇತ
  • ತ್ಯಾಗದ ಮತ್ತೊಂದು ಹೆಸರು

ಒಬ್ಬ ಮಹಿಳೆಯ ನಿರ್ಧಾರ, ಸಹನೆ ಮತ್ತು ಕಾಳಜಿ ಒಂದು ಕುಟುಂಬದ ಭವಿಷ್ಯವನ್ನೇ ಬದಲಾಯಿಸಬಹುದು.

ಒಬ್ಬ ತಾಯಿ ಮಕ್ಕಳಿಗೆ ಕೊಡುವ ಸಂಸ್ಕಾರ ಮತ್ತು ಮೌಲ್ಯಗಳು ಮುಂದಿನ ಪೀಳಿಗೆಯ ಜೀವನವನ್ನೇ ರೂಪಿಸಬಹುದು.

ಕೊನೆಯ ಮಾತು

ಇಂದು Mother’s Day ದಿನ ನಾವು ಒಂದು ವಿಷಯ ನೆನಪಿಡಬೇಕು.

ಮಹಿಳೆಯರ ಜೀವನ ಹೊರಗಿನಿಂದ ನೋಡಿದಷ್ಟು ಸುಲಭ ಅಲ್ಲ.

ತಾಯಿ ಆಗಿ, ಪತ್ನಿಯಾಗಿ, ಮಗಳಾಗಿ ಅವರು ಪ್ರತಿದಿನ ಅನೇಕ ಜವಾಬ್ದಾರಿಗಳನ್ನು ಹೊರುತ್ತಾರೆ. ಹಲವಾರು ಬಾರಿ ತಮ್ಮ ಸಂತೋಷಕ್ಕಿಂತ ಕುಟುಂಬದ ಸಂತೋಷವನ್ನು ಮೊದಲಿಗೆ ಇಡುತ್ತಾರೆ.

ಅವರ ಶ್ರಮಕ್ಕೆ salary ಇರಲಿಕ್ಕಿಲ್ಲ. Award ಸಿಗಲಿಕ್ಕಿಲ್ಲ. ಆದರೆ ಒಂದು ಕುಟುಂಬ ನಿಂತಿರೋದಕ್ಕೆ ಅವರ ಪಾತ್ರ ತುಂಬಾ ದೊಡ್ಡದು.

ಮಗಳು ಭಾರ ಅಲ್ಲ. ಗೃಹಿಣಿಯ ಕೆಲಸ ಸಣ್ಣದು ಅಲ್ಲ. ಮಹಿಳೆಯ ಕನಸುಗಳಿಗೆ ಮೌಲ್ಯ ಇದೆ. ಮಹಿಳೆಯ ಶ್ರಮಕ್ಕೆ ಗೌರವ ಇರಬೇಕು.

ಈ Mother’s Day ದಿನ ಕೇವಲ social media status ಹಾಕುವುದಕ್ಕಿಂತ ನಮ್ಮ ಮನೆಯ ಮಹಿಳೆಯರಿಗೆ ಒಂದು ಒಳ್ಳೆಯ ಮಾತು ಹೇಳೋಣ. ಅವರ ಕೆಲಸವನ್ನು appreciate ಮಾಡೋಣ. ಅವರಿಗೆ ಸಮಯ ಕೊಡೋಣ.

ನನ್ನಿಂದ ಎಲ್ಲಾದರೂ ತಪ್ಪಾಗಿದ್ದರೆ ಕ್ಷಮಿಸಿ. ಬಹಳ ದಿನಗಳ ನಂತರ ಕನ್ನಡದಲ್ಲಿ ಬರೆಯುತ್ತಿರುವುದರಿಂದ ಕೆಲವು ತಪ್ಪುಗಳು ಇರಬಹುದು. ಕೊನೆಯದಾಗಿ ಹೇಳುವುದೇನೆದರೆ ಮಹಿಳೆಯರ ಸಹನೆ, ಕಾಳಜಿ ಮತ್ತು ತ್ಯಾಗಕ್ಕೆ ಒಂದು ದೊಡ್ಡ ನಮಸ್ಕಾರ.


Like and Share

If you found this article helpful, share it with your friends and family, and tap the like button to support more such content.